ಸೋಮರಾಜ
	ಪ್ರಾಚೀನ ಕನ್ನಡ ಕವಿ. ಉದ್ಭಟಕಾವ್ಯದ ಕರ್ತೃ. ಈತನ ಪೂರ್ವಿಕರು ಚೌಟ ರಾಜಮನೆತನಕ್ಕೆ ಸೇರಿದವರು. ತಂದೆ ಇಂದುಶೇಖರ. ಗುರು ಅಲ್ಲಮಪ್ರಭು. ಈತನಿಗೆ ಸೋಮ, ಸೋಮರಾಜೇಂದ್ರ ಎಂಬ ಹೆಸರುಗಳೂ ಪರಮ e್ಞÁನಿ ಎಂಬ ಬಿರುದೂ ಇದ್ದುವು. ಹರಿಹರ, ಪಾಲ್ಕುರಿಕೆ ಸೋಮನಾಥ, ಕೆರೆಯ ಪದ್ಮರಸ ಮೊದಲಾದ ಕನ್ನಡ ಕವಿಗಳನ್ನೂ ಮಾಘ ಮೊದಲಾದ ಸಂಸ್ಕøತ ಕವಿಗಳನ್ನೂ ತನ್ನ ಕಾವ್ಯದಲ್ಲಿ ಸ್ಮರಿಸಿದ್ದಾನೆ. 

	ಉದ್ಭಟಕಾವ್ಯ ಒಂದು ಚಂಪೂಗ್ರಂಥ. ಶೃಂಗಾರಸಾರ ಎಂಬುದು ಇದಕ್ಕಿರುವ ಇನ್ನೊಂದು ಹೆಸರು. ಈ ಗ್ರಂಥದಲ್ಲಿ ಹನ್ನೆರಡು ಆಶ್ವಾಸಗಳಿವೆ. ಘೂರ್ಜರ ದೇಶದ ಉದ್ಭಟದೇವನ ಚರಿತ್ರೆ ಇದರ ಕಥಾವಸ್ತು. ಹರಿಹರ ಕವಿಯ ಉದ್ಭಟ ರಗಳೆ ಈ ಕಾವ್ಯಕ್ಕೆ ಮುಖ್ಯ ಆಧಾರ. ಹರಿಹರನ ಕೃತಿಯಲ್ಲಿ ಇಲ್ಲದ ಚದುರಂಗ ಚರಿತೆ, ಶುಕ ಸಂಭಾಷಿಣಿ, ನಿಜರ್ಘಾ ಸುರಸಂಹಾರ - ಇವು ಈತನ ಸ್ವಂತ ಕಲ್ಪನೆಗಳು. ಈತನ ಶೈಲಿ ಲಲಿತವಾಗಿದೆ; ವರ್ಣನೆಗಳಲ್ಲಿ ಹೊಸ ದೃಷ್ಟಿ ಇದೆ.		
	(ಆರ್.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ